
15th October 2025
ಕುಷ್ಟಗಿ : ಬೈಕ್ ಮತ್ತು ಲಾರಿ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ಬುಧವಾರ ಸಂಜೆ ಕುಷ್ಟಗಿ ತಾಲೂಕಿನ ವಣಗೇರಿ ಗ್ರಾಮದ ಜಿಯೋ ಪೆಟ್ರೋಲ್ ಬಂಕ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ದುರ್ಧೈವಿ ಯುವಕನನ್ನು ತಾಲೂಕಿನ ಕೆ. ಬೋದೂರು ಗ್ರಾಮದ ನಿವಾಸಿ ಅಮರೇಶ ಗದ್ದೆಪ್ಪ 35 ವರ್ಷ ಎಂದು ತಿಳಿದು ಬಂದಿದೆ.
ಕುಷ್ಟಗಿ NH ಹೈವೇ ಮೊಬೈಲ್ ASI ಮುತ್ತಣ್ಣ ಅವರು ಅಪಘಾತವಾದ ಸುದ್ದಿ ತಿಳಿದ ತಕ್ಷಣ, ಕೂಡಲೇ ಸ್ಥಳಕ್ಕೆ ಭೇಟಿ ನೀಡಿದರು. ಮೃತಪಟ್ಟ ಬೈಕ್ ಸವಾರನನ್ನು ಕುಷ್ಟಗಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಈ ರಸ್ತೆಗಳಲ್ಲಿ ಓಡಾಡುತ್ತಿದ್ದು ಯಾವುದೇ ವಾಹನಕ್ಕೆ ಅಡೆತಡೆಯಾಗದಂತೆ ಹೈವೇ ಮೊಬೈಲ್ ASI ಮುತ್ತಣ್ಣ ಅವರು ನೋಡಿಕೊಂಡರು.
ಘಟನೆ ನಡೆದ ಸ್ಥಳಕ್ಕೆ ಸಿಪಿಐ ಯಶವಂತ್ ಬಿಸನಹಳ್ಳಿ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ ಮತ್ತು ಅಲ್ಲಿ ಗುಂಪುಗುಡಿದ್ದ ಜನರನ್ನು ತಿಳಿಗೊಳಿಸಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡಿದ್ದಾರೆ.
ಮೃತ ಅಮರೇಶನು ಪೆಟ್ರೋಲ್ ಪಂಪಿನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಕುಷ್ಟಗಿ ಕಡೆ ತೆರಳುವ ಮಾರ್ಗದಲ್ಲಿ ಈ ದುರ್ಘಟನೆ ನಡೆದಿದ್ದು ಮೃತನಿಗೆ
ಯಲ್ಲಮ್ಮ 7 ತಿಂಗಳ ಗರ್ಭಿಣಿ ಪತ್ನಿ, ಓರ್ವ ಪುತ್ರ ಹರೀಶ್ ಕುಮಾರ್ 4 ವರ್ಷ, ಓರ್ವ ಪುತ್ರಿ ಆದ್ಯ 3 ವರ್ಷ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಈ ಕುರಿತು ಕುಷ್ಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ರಿಪೋರ್ಟರ್ : ಭೀಮಸೇನರಾವ್ ಕುಲಕರ್ಣಿ ಜಿಎಂ ನ್ಯೂಜ್ ಕುಷ್ಟಗಿ.
ಬೈಕ್ ಮತ್ತು ಲಾರಿ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ಬುಧವಾರ ಸಂಜೆ ಕುಷ್ಟಗಿ ತಾಲೂಕಿನ ವಣಗೇರಿ ಗ್ರಾಮದ ಜಿಯೋ ಪೆಟ್ರೋಲ್ ಬಂಕ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಬಡ ವ್ಯಾಪಾರಿಗಳು ಜೀವನೋಪಾಯ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ : ಎಸ್. ದೇವಾನಂದ
ಮುತ್ತಗಾ ಗ್ರಾಮದಲ್ಲಿ ಕೂಲಿ ಸಮಾಜದ ಮಹಾ ಶರಣ, ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿಗೆ ಅಪಮಾನ ಮಾಡಿದವರನ್ನು ಬಂಧಿಸುವಂತೆ ಹಲವು ಭಾರಿ ಒತ್ತಾಯ ಮಾಡಿದರೂ ಯಾವುದೇ ಕ್ರಮಕೈಗೊಳ್ಳದೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಶ್ನೆ ಮಾಡಿದವರನ್ನು ಬಂಧಿಸುವುದು ಯಾವ ನ್ಯಾಯ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ